ಭಾರತ ಸಂವಿಧಾನದ ವಿಧಿಗಳು
ಭಾಗ - 1 :
ಒಕ್ಕೂಟ ಮತ್ತು ಅದರ ಭೂಪ್ರದೇಶ
1. ಒಕ್ಕೂಟದ ಹೆಸರು ಮತ್ತು ಭೂಪ್ರದೇಶ
2. ಹೊಸ ರಾಜ್ಯಗಳ ಸೇರ್ಪಡೆ ಅಥವಾ ಸ್ಥಾಪನೆ
2a . ರದ್ದುಪಡಿಸಲಾಗಿದೆ
3. ಹೊಸ ರಾಜ್ಯಗಳ ರಚನೆ ಮತ್ತು ಆಸ್ತಿತ್ವದಲ್ಲಿರುವ ರಾಜ್ಯಗಳ ಪ್ರದೇಶಗಳ, ಗಡಿಗಳ ಅಥವಾ ಹೆಸರುಗಳ ಬದಲಾವಣೆ
4. 2 ನೆಯ ಮತ್ತು 3 ನೆಯ ಪರಿಚ್ಛೇದಗಳ ಮೇರೆಗೆ ಮಾಡಲಾದ ಕಾನೂನುಗಳು ಮೊದಲನೆಯ ಮತ್ತು ನಾಲ್ಕನೆಯ ಅನುಸೂಚಿಗಳ ತಿದ್ದುಪಡಿಯ ಬಗ್ಗೆ ಮತ್ತು ಪೂರಕ, ಪ್ರಾಸಂಗಿಕ ಮತ್ತು ಆನುಷಂಗಿಕ ವಿಷಯಗಳ ಬಗ್ಗೆ ಉಪಯಬಂಧವನ್ನು ಕಲ್ಪಿಸುವುದು.
ಭಾಗ -2
ಪೌರತ್ವ
5. ಸಂವಿಧಾನ ಜಾರಿಗೆ ಬಂದ ಸಂದರ್ಭದಲ್ಲಿ ಪೌರತ್ವ
6. ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಕೆಲವು ವ್ಯಕ್ತಿಗಳ ಪೌರತ್ವದ ಹಕ್ಕು
7. ಪಾಕಿಸ್ತಾನಕ್ಕೆ ವಲಸೆ ಹೋದ ಕೆಲವರ ಪೌರತ್ವದ ಹಕ್ಕುಗಳು
8. ಭಾರತದ ಹೊರಗೆ ನೆಲಸಿರುವ ಭಾರತೀಯ ಮೂಲದ ಕೆಲವು ವ್ಯಕ್ತಿಗಳ ಪೌರತ್ವದ ಹಕ್ಕುಗಳು
9. ಸ್ವಇಚ್ಛೆಯಿಂದ ವಿದೇಶದ ಪೌರತ್ವ ಪಡೆಯುವ ವ್ಯಕ್ತಿಗಳನ್ನು ಪೌರರೆಂದು ಪರಿಗಣಿಸುವಂತಿಲ್ಲ
10. ಪೌರತ್ವ ಹಕ್ಕುಗಳನ್ನು ಮುಂಡುವರೆಸುವುದು
11. ಸಂಸತ್ತು ಕಾನೂನಿನ ಮೂಲಕ ಪೌರತ್ವದ ಹಕ್ಕನ್ನು ನಿಯಂತ್ರಿಸತಕ್ಕದು
ಭಾಗ -3
ಮೂಲಭೂತ ಹಕ್ಕುಗಳು
12. ರಾಜ್ಯದ ವ್ಯಾಖ್ಯೆ
13. ಮೂಲಭೂತ ಹಕ್ಕುಗಳಿಗೆ ಪೂರಕವಲ್ಲದ ಅಥವಾ ಚ್ಯುತಿ ಉಂಟುಮಾಡುವ ಕಾನೂನುಗಳು
14. ಕಾನೂನಿನ ಮುಂದೆ ಸಮಾನತೆ
15. ಧರ್ಮ, ಜನಾಂಗ, ಜಾತಿ, ಲಿಂಗ, ಅಥವಾ ಜನ್ಮಸ್ಥಳ ಇವುಗಳ ಆಧಾರದ ಮೇಲೆ ತಾರತಮ್ಯ ನಿರಬಂದ.
16. ಸಾರ್ವಜನಿಕ ನೇಮಕಾತಿ ವಿಷಯದಲ್ಲಿ ಸಮಾನ ಅವಕಾಶ
17. ಅಸ್ಪೃಶ್ಯತಾ ವಿವಾರಣೆ
18. ಬಿರುದುಗಳ ರದ್ದತಿ
19. ವಾಕ್ ಸ್ವಾತಂತ್ರ್ಯ ಹಾಗೂ ಇತರೆ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕೆಲವು ಹಕ್ಕುಗಳ ರಕ್ಷಣೆ
20. ಅಪರಾಧಗಳ ಬಗ್ಗೆ ಅಪರಾದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಷಣೆ
21. ಜೀವ ಮತ್ತು ವೈಯುಕ್ತಿಕ ಸ್ವಾತಂತ್ರ್ಯ ರಕ್ಷಣೆ
21 a . ಶಿಕ್ಷಣ ಒಂದು ಮೂಲಭೂತ ಹತ್ತು ( 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ)
22. ಕೆಲವು ಪ್ರಕರಣಗಳಲ್ಲಿ ಬಂಧನ ಮತ್ತು ಸೆರೆವಾಸದ ವಿರುದ್ದ ರಕ್ಷಣೆ
23. ಮಾನವನ ಮಾರಾಟ ಮತ್ತು ಬಲವಂತದ ದುಡಿಮೆ ನಿಷೇಧ
24. ಕಾರ್ಖಾನೆ ಹಾಗೂ ಇತರೆ ಅಪಾಯಕಾರಿ ಸ್ಥಳಗಳಲ್ಲಿ ಮಕ್ಕಳನ್ನು ನೇಮಕ ಮಾಡುವುದು ನಿಷೇಧ
25. ಆತ್ಮಸಾಕ್ಷಿ ಸ್ವಾತಂತ್ರ್ಯ ಮತ್ತು ಒಂದು ಧರ್ಮವನ್ನು ಪಾಲಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವು ಸ್ವಾತಂತ್ರ್ಯ
26. ಧಾರ್ಮಿಕ ವಿಷಯಗಳನ್ನು ನಿರ್ವಹಿಸುವ ಸ್ವಾತಂತ್ರ್ಯ
27. ಯಾವುದೇ ನಿರ್ದಿಷ್ಟ ಧರ್ಮವನ್ನು ಪ್ರೋತ್ಸಾಹಿಸಲು ತೆರಿಗೆ ಪಾವತಿ ಮಾಡುವುದಕ್ಕೆ ಸಂಬಂದಿಸಿದ ಸ್ವಾತಂತ್ರ್ಯ
28 ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಗೆ ಅಥವಾ ಧಾರ್ಮಿಕ ಪೂಜೆಗೆ ಹಾಜರಗುವುದಕ್ಕೆ ಸಂಬಂದಿಸಿದ ಸ್ವಾತಂತ್ರ್ಯ
29. ಅಲ್ಪಸಂಖ್ಯಾತರ ಹಿತಾಸಕ್ತಿ ಸಂರಕ್ಷಣೆ
30. ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು ನತ್ತು ನಿರ್ವಹಿಸುವುದು ಅಲ್ಪಸಂಖ್ಯಾತರ ಹಕ್ಕು
31. ರದ್ದುಪಡಿಸಲಾಗಿದೆ
31 a . ಎಸ್ಟೇಟು ಮುಂತಾಡವುಗಕ ಅರ್ಜನೆಗೆ ಉಪಯಬಂದಿಸುವ ಕಾನೂನುಗಳನ್ನು ಉಳಿಸುವುದು
31 b . ಕೆಲವು ಕಾರ್ಯಗಳನ್ನು ಮತ್ತು ನಿಯಮಗಳನ್ನು ಸಿಂಧುಗೊಳಿಸುವುದು
31 c . ಕೆಲವು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರುವ ಕಾನೂನುಗಳ ಉಳಿಸುವಿಕೆ
31 d . ರದ್ದುಪಡಿಸಲಾಗಿದೆ
32. ರಿಟ್ ಗಳನ್ನು ಒಳಗೊಂಡಂತೆ ಮೂಲಭೂತ ಹಕ್ಕುಗಳನ್ನು ಅನುಷ್ಟಾನಗೊಳಿಸುವುದಕ್ಕೆ ಸಂಬಂಧಿಸಿದ ಪರಿಹಾರಗಳು
32 a . ರದ್ದುಪಡಿಸಲಾಗಿದೆ
33. ಸಶಸ್ತ್ರ ಪಡೆಗಳಿಗೆ ಅನ್ವಯಿಸುವಲ್ಲಿ ಮೂಲಭೂತ ಹಕ್ಕುಗಳನ್ನು ಮಾರ್ಪಾಡು ಮಾಡಲು ಸಂಸತ್ತಿಗೆ ಇರುವ ಸ್ವಾತಂತ್ರ್ಯ
34. ಯಾವುದೇ ಪ್ರದೇಶದಲ್ಲಿ ಮಾರ್ಷಲ್ ಕಾನೂನು ಜಾರಿಯಲ್ಲಿರುವಾಗ ಮೂಲಭೂತ ಹಕ್ಕುಗಳ ಮೇಲೆ ವಿಧಿಸಲಾಗುವ ನಿರ್ಬಂಧಗಳು
35. ಮೂಲಭೂತ ಹಕ್ಕುಗಳ ಕೆಲವು ಉಪಯಬಂಧಗಳನ್ನು ಜಾರಿಗೊಳಿಸುವುದಕ್ಕೆ ಸಂಬಂದಿಸಿದ ಶಾಸನಗಳು
ಭಾಗ -4
ರಾಜ್ಯ ನಿರಧೇಶಕ ತತ್ವಗಳು
36. ಈ ಭಾಗದಲ್ಲಿ ಪ್ರದತ್ತವಾದ ರಾಜ್ಯದ ವ್ಯಾಖ್ಯೆ
37. ರಾಜ್ಯ ನಿರ್ದೇಶಕ ತತ್ವಗಳ ಅನ್ವಯ
38. ಜನರ ಕಲ್ಯಾಣವನ್ನು ಪ್ರೋತ್ಸಾಹಿಸಲು ಪೂರಕವಾದ ಸಾಮಾಜಿಕ ವ್ಯವಸ್ಥೆಯನ್ನು ರಾಜ್ಯ ನಿರ್ಮಿಸತಕ್ಕದ್ಡು
39. ರಾಜ್ಯವು ಪಾಲಿಸಬೇಕಾದ ಕೆಲವು ತತ್ವಗಳು
39 a . ಸಮಾನ ನ್ಯಾಯ ಮತ್ತು ಉಚ್ಛಿತ ಕಾನೂನು ನೆರವು
40. ಗ್ರಾಮ ಪಂಚಾಯತಿಗಳ ಸ್ಥಾಪನೆ
41. ಉದ್ಯೋಗ, ಶಿಕ್ಷಣ ಮತ್ತು ಸರ್ಕಾರದ ಸಹಾಯ ಪಡೆಯುವ ಹಕ್ಕು
42. ನ್ಯಾಯಾಯುತ ನತ್ತು ಮಾನವೀಯ ಸ್ಥಿತಿಗಳನ್ನು ಒದಗಿಸುವುದು, ಹೆರಿಗೆ ಭತ್ಯೆ ಒದಗಿಸುವುದು.
43. ಕೆಲಸಗಾರರಿಗೆ ಜೀವನ ನಿರ್ವಹಣಾ ಕೂಲಿ, ಇತ್ಯಾದಿ
43 a . ಕೈಗಾರಿಕೆಗಳ ನಿರ್ವಹಣೆಯಲ್ಲಿ ಕಾರ್ಮಿಕರ ಭಾಗವಹಿಸುವುಕೆ.
43 b . ಸಹಕಾರ ಸಂಘಗಳ ಐಚ್ಚಿಕ ರಚನೆ, ಸ್ವಾಯತ್ತ ಕಾರ್ಯ ನಿರ್ವಹಣೆ, ಪ್ರಜಾಸತ್ತಾತ್ಮಕ ನಿಯಂತ್ರಣ ಮತ್ತು ವೃತ್ತಿ ಪರ ನಿರ್ವಹಣೆಯನ್ನು ಪ್ರೋತ್ಸಾಹಿಸುವುದು.
44. ಪೌರರಿಗೆ ಏಕರೂಪ ನಾಗರಿಕ ಸಂಹಿತೆ
45. ಆರು ವರ್ಷಗಳವರೆಗಿನ ಎಲ್ಲ ಮಕ್ಕಳಿಗೆ ಫೋಷಣೆ ಮತ್ತು ಶಿಕ್ಷಣವನ್ನು ನೀಡುವುದು.
46. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಶಕ್ತಿಗೆ ಪ್ರೋತ್ಸಾಹ ನೀಡುವುದು
47. ಪೌಷ್ಟಿಕತೆಯ ಮಟ್ಟ ಮತ್ತು ಜೀವನ ಮಟ್ಟವನ್ನು ಹೆಚ್ಚಿಸುವುದು ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತಮ ಪಡಿಸುವುದು ರಾಜ್ಯದ ಕರ್ತವ್ಯ
48. ಕೃಷಿ ಮತ್ತು ಪಶು ಸಂಗೋಪಣೆಯನ್ನು ಸಂಘಟಿಸುವುದು
48 a . ಪರಿಸರವನ್ನು ಕಾಪಾಡುವುದು ಹಾಗೂ ಸುಧಾರಿಸುವುದು ಮತ್ತು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ
49. ರಾಷ್ಟ್ರೀಯ ಮಹತ್ವದ ಸ್ಮಾರಕಗಳು ಮತ್ತು ಸ್ಥಳಗಳು ಮತ್ತು ವಸ್ತುಗಳ ಸಂರಕ್ಷಣೆ
50. ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು
51. ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಪ್ರೋತ್ಸಾಹಿಸುವುದು
ಭಾಗ - 4a
51a . ಮೂಲಭೂತ ಕರ್ತವ್ಯಗಳು
ಭಾಗ -5 ಕೇಂದ್ರ ಸರ್ಕಾರ
ಅಧ್ಯಾಯ - 1 :- ಕಾರ್ಯಾಂಗ
ರಾಷ್ಟ್ರಾಧ್ಯಕ್ಷರು ಮತ್ತು ಉಪರಾಷ್ಟ್ರಾಧ್ಯಕ್ಷರು
52. ರಾಷ್ಟ್ರಾಧ್ಯಕ್ಷರು
53. ಕೇಂದ್ರ ಸರ್ಕಾರದ ಕಾರ್ಯ ನಿರ್ವಾಹಕ ಅಧಿಕಾರಿಗಳು
54. ರಾಷ್ಟ್ರಾಧ್ಯಕ್ಷರ ಚುನಾವಣೆ
55. ರಾಷ್ಟ್ರಾಧ್ಯಕ್ಷರ ಚುನಾವಣಾ ವಿಧಾನ
56. ರಾಷ್ಟ್ರಾಧ್ಯಕ್ಷರ ಅಧಿಕಾರವಧಿ
57. ಮರುಚುನಾವಣೆಗೆ ಅರ್ಹತೆ
58. ರಾಷ್ಟ್ರಾಧ್ಯಕ್ಷರ ಹುದ್ದೆಗೆ ಅರ್ಹತೆಗಳು
59. ರಾಷ್ಟ್ರಾಧ್ಯಕ್ಷರ ಹುದ್ದೆಯ ನಿಯಮಗಳು
60. ರಾಷ್ಟ್ರಾಧ್ಯಕ್ಷಯರಿಂದ ಪ್ರಮಾಣ ವಚನ ಸ್ವೀಕಾರ
61. ರಾಷ್ಟ್ರಾಧ್ಯಕ್ಷರ ಪದಚ್ಯುತಿ ( ಮಹಾಭಿಯೋಗ)ಗೆ ಸಂಬಂಧಿಸಿದ ನಿಯಮಗಳು
62. ರಾಷ್ಟ್ರಪತಿ ಪದವಿತೆರವಾದರೆ ಅದನ್ನು ಭರ್ತಿ ಮಾಡಲು ಚುನಾವಣೆ ನಡಸುವ ಕಾಲ ಮತ್ತು ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತನಾದ ವ್ಯಕ್ತಿಯ ಅಧಿಕಾರಾವಧಿ
63. ಭಾರತದ ಉಪ ರಾಷ್ಟ್ರಾಧ್ಯಕ್ಷರು
64. ಉಪರಾಷ್ಟ್ರಾಧ್ಯಕ್ಷರು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸತಕ್ಕದ್ಡು.
65. ರಾಷ್ಟ್ರಾಧ್ಯಕ್ಷರ ಹುದ್ದೆ ತೆರವಾದಗ ಅಥವಾ ರಾಷ್ಟ್ರಾಧ್ಯಕ್ಷರ ಗೈರು ಹಾಜರಿಯಲ್ಲಿ ಉಪ ರಾಷ್ಟ್ರಾಧ್ಯಕ್ಷರು ರಾಷ್ಟ್ರಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಬೇಕು ಅಥವಾ ರಾಷ್ಟ್ರಾಧ್ಯಕ್ಷರ ಕಾರ್ಯಗಳನ್ನು ನಿರ್ವಹಿಸಬೇಕು.
66. ಉಪರಾಷ್ಟ್ರಾಧ್ಯಕ್ಷರ ಚುನಾವಣೆ
67.ಉಪರಾಷ್ಟ್ರಾಧ್ಯಕ್ಷರ ಅಧಿಕಾರವಧಿ
68. ಉಪರಾಷ್ಟ್ರಾಧ್ಯಕ್ಷರ ಹುದ್ದೆ ಖಾಲಿಯಾದಲ್ಲಿ ಅದನ್ನು ಭರ್ತಿ ಮಾಡಲು ಚುನಾವಣೆ ನಡೆಸುವ ಕಾಲ ಮತ್ತು ಆಕಸ್ಮಿಕ ಖಾಲಿ ಸ್ಥಾನವನ್ನು ಭರ್ತಿ ಮಾಡಲು ಚುನಾಯಿತನಾದ ವ್ಯಕ್ತಿಯ ಅಧಿಕಾರವಧಿ
69. ಉಪರಾಷ್ಟ್ರಾಧ್ಯಕ್ಷರ ಪ್ರಮಾಣ ವಚನ ಸ್ವೀಕಾರ
70. ಇತರೆ ತುರ್ತು ಸಂದರ್ಭಗಳಲ್ಲಿ ರಾಷ್ಟ್ರಾಧ್ಯಕ್ಷರ ಕಾರ್ಯಗಳ ನಿರ್ವಹಣೆ
71. ರಾಷ್ಟ್ರಾಧ್ಯಕ್ಷರು ಅಥವಾ ಉಪ ರಾಷ್ಟ್ರಾಧ್ಯಕ್ಷರು ಚುನಾವಣೆಗೆ ಸಂಬಂಧಿಸಿದ ವಿಷಯಗಳು
72. ಶಿಕ್ಷೆಯನ್ನು ಕ್ಷೇಮಯಿಸುವ, ಕಡಿಮೆ ಮಾಡುವ ಅಥವಾ ಬದಲಾಯಿಸಲು ರಾಷ್ಟ್ರಾಧ್ಯಕ್ಷರಿಗೆ ಇರುವ ಅಧಿಕಾರ
73. ಕೇಂದ್ರ ಸರ್ಕಾರದ ಕಾರ್ಯ ನಿರ್ವಾಹಕ ಅಧಿಕಾರದ ವ್ಯಾಪ್ತಿ
ಕೇಂದ್ರ ಮಂತ್ರಿ ಮಂಡಲ ಮತ್ತು ಅಟಾರ್ನಿ ಜನರಲ್
74. ರಾಷ್ಟ್ರಾಧ್ಯಕ್ಷರಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿ ಮಂಡಲ
75. ಮಂತ್ರಿಗಳಿಗೆ ಸಂಬಂಧಿಸಿದ ಇತರೆ ಉಪಬಂಧಗಳು
76. ಭಾರತದ ಅಟಾರ್ನಿ ಜನರಲ್
77. ಭಾರತದ ಸರ್ಕಾರದ ಕಾರ್ಯ ನಿರ್ವಹಣೆ
78. ರಾಷ್ಟ್ರಾಧ್ಯಕ್ಷರಿಗೆ ಮಾಹಿತಿ ಇತ್ಯಾದಿಗಳನ್ನು ಒದಗಿಸುವುದಕ್ಕೆ ಸಂಬಂಧಿಸಿದ ಪ್ರಾಧಾನಿಯ ಕರ್ತವ್ಯಗಳು
ಅಧ್ಯಾಯ -2 ಸಂಸತ್ತು
79. ಸಂಸತ್ತಿನ ರಚನೆ
80. ರಾಜ್ಯಸಭೆಯ ರಚನೆ
81. ಲೋಕ ಸಭೆಯ ರಚನೆ
82. ಪ್ರತಿ ಜನಗಣತಿ ನಂತರ ಮರು ಹೊಂದಾಣಿಕೆ
83. ಸಂಸತ್ ಸದನಗಳ ಅಧಿಕಾರವಧಿ
84. ಸಂಸತ್ ಸದಸ್ಯರ ಅಧಿಕಾರವಧಿ
85. ಸಂಸತ್ತಿನ ಅಧಿವೇಶನ, ಮುಂದೊಡಿಕೆ ಮತ್ತು ವಿಸರ್ಜನೆ
86. ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡುವ ಹಾಗೂ ಎರಡೂ ಸದನಗಳಿಗೆ ಸಂದೇಶಗಳನ್ನು ಕಳುಹಿಸುವ ರಾಷ್ಟ್ರಾಧ್ಯಕ್ಷರ ಹಕ್ಕು
87. ರಾಷ್ಟ್ರಾಧ್ಯಕ್ಷರ ವಿಶೇಷ ಭಾಷಣ
88. ಸದನದಲ್ಲಿ ಮಂತ್ರಿಗಳ ಮತ್ತು ಅಟಾರ್ನಿ ಜನರಲ್ ರವರ ಹಕ್ಕುಗಳು
89. ರಾಜ್ಯ ಸಭೆಯ ಸಭಾಪತಿ ಮತ್ತು ಉಪ ಸಭಾಪತಿ
90. ರಾಜ್ಯಸಭೆಯ ಉಪ ಸಭಾಪತಿಗಳ ಹುದ್ದೆ ತೆರವು, ರಾಜೀನಾಮೆ ಮತ್ತು ಪದಚ್ಯುತಿ
91. ರಾಜ್ಯ ಸಭೆಯ ಉಪಸಭಾಪತಿಗಳ ಅಧಿಕಾರ
92. ರಾಜ್ಯಸಭೆಯ ಸಭಾಪತಿ ಅಥವಾ ಉಪ ಸಭಾಪತಿಗಳು ತಮ್ಮ ಪದಚ್ಯುತಿಗೆ ಸಂಬಂಧಿಸಿದ ನಿರ್ಣಯ ಚರ್ಚೆಯಲ್ಲಿರುವಾಗ ಸದನದ ಅಧ್ಯಕ್ಷತೆ ವಹಿಸುವಂತಿಲ್ಲ
93. ಲೋಕಸಭೆಯ ಸಭಾಧ್ಯಯಕ್ಷರು ಮತ್ತು ಉಪ ಸಭಾಧ್ಯಕ್ಷರು
94. ಲೋಕಸಭೆಯ ಸಭಾಧ್ಯಕ್ಷರು ಮತ್ತು ಉಪ ಸಭಾಧ್ಯಕ್ಷರ ಹುದ್ದೆಯ ತೆರವು , ರಾಜೀನಾಮೆ ಹಾಗೂ ಪಡೆಚ್ಯುತಿ
95. ಲೋಕಸಭೆಯ ಉಪಸಭಾಧ್ಯಕ್ಷರ ಅಧಿಕಾರ
96. ಸಭಾಧ್ಯಕ್ಷ ಮತ್ತು ಉಪಸಭಾಧ್ಯಕ್ಷ ತಮ್ಮ ಪದಚ್ಯುತಿಗೆ ಸಂಬಂಧಿಸಿದ ನಿರ್ಣಯ ಚರ್ಚೆ ಯಲ್ಲಿರುವಾಗ ಸದನದ ಅಧ್ಯಕ್ಷತೆ ವಹಿಸುವಂತಿಲ್ಲ.
97. ಸಭಾಪತಿ, ಉಪ ಸಭಾಪತಿ ಮತ್ತು ಸಭಾಧ್ಯಕ್ಷ, ಉಪಸಭಾಧ್ಯಕ್ಷರ ವೇತನ ಮತ್ತು ಭತ್ಯೆಗಳು
98. ಸಂಸತ್ ಸಚಿವಾಲಯ
99. ಸಂಸತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ
100. ಸದನದಲ್ಲಿ ಮತದಾನ
101. ಸ್ಥಾನಗಳ ತೆರವು
102. ಸದಸ್ಯರ ಅರ್ಹತೆ
103. ಸದಸ್ಯರ ಅನಾರ್ಹತೆಗೆ ಸಂಬಂಧಿಸಿದ ನಿರ್ಣಯ
104. ಪ್ರಮಾಣ ವಚನ ಸ್ವೀಕರಿಸಿದ ಸದನದಲ್ಲಿ ಹಾಜರಾದರೆ ಅಥವಾ ಮತ ಹಾಕಿದರೆ ದಂಡ ವಿಧಿಸಲಾಗುತ್ತದೆ.
105. ಸಂಸತ್ತಿನ ಸದನಗಳ ಮತ್ತು ಅವುಗಳ ಸದಸ್ಯರ ಮತ್ತು ಸಮಿತಿಗಳ ಅಧಿಕಾರಗಳು, ಸೌಲಭ್ಯಗಳು ಇತ್ಯಾದಿ
106. ಸದಸ್ಯರ ವೇತನ ಮತ್ತು ಇತರೆ ಭತ್ಯೆಗಳು
107. ಮಸೂದೆಗಳನ್ನು ಮಂಡಿಸುವುದಕ್ಕೆ ಮತ್ತು ಪಾಸುಮಾಡುವುದಕ್ಕೆ ಸಂಬಂಧಿಸಿದ ಉಪಯಬಂಧಗಳು
108. ಸಂಸತ್ತಿನ ಜಯಂತಿ ಅಧಿವೇಶನ
109. ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ವಿಶೇಷ ನಿಯಮಗಳು
110. ಹಣಕಾಸು ಮಸೂದೆಯ ವ್ಯಾಖ್ಯೆ
111. ಮಸೂದೆಗಳಿಗೆ ಒಪ್ಪಿಗೆ
112. ವಾರ್ಷಿಕ ಹಣಕಾಸು ವಿವರ ಪತ್ರ ( ಮುಂಗಡ ಪತ್ರ )
113. ಅಂದಾಜುಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ನಿಯಮಗಳು
114. ವಿನಿಯೋಗ ಮಸೂದೆಗಳು
115. ಪೂರಕ, ಹೆಚ್ಚುವರಿ ಅನುದಾನ
116. ಅನುದಾನದ ಮೇಲಿನ ಮತದಾನ
117. ಹಣಕಾಸು ಮಸೂದೆಗೆ ಸಂಬಂಧಿಸಿದ ವಿಶೇಷ ಉಪಬಂಧಗಳು
118. ಪ್ರಕ್ರೆಯಾ ನಿಯಮಗಳು
119. ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಯಮ ನಿಯಂತ್ರಣ
120. ಸಂಸತ್ತಿನಲ್ಲಿ ಬಳಸಬೇಕಾದ ಭಾಷೆಗಳು
121. ಸಂಸತ್ತಿನ ಚರ್ಚೆಯ ಮೇಲಿನ ನಿರ್ಬಂಧ
122. ನ್ಯಾಯಾಲಯಗಳು ಸಂಸತ್ತಿನ ಕಾರ್ಯ ಕಲಾಪಗಳನ್ನು ವಿಚಾರಣೆಗೆ ಒಳಪಡಿಸುವಂತಿಲ್ಲ.
ಅಧ್ಯಾಯ -3 ರಾಷ್ಟ್ರಾಧ್ಯಕ್ಷರ ಶಾಸನೀಯ ಅಧಿಕಾರಗಳು
123. ಸಂಸತ್ತು ಅಧಿವೇಶನದಲ್ಲಿ ಇಲ್ಲದಿರುವಾಗ ಸುಗ್ರೀವಾಜ್ಞೆ ಯನ್ನು ಹೊರಡಿಸುವ ರಾಷ್ಟ್ರಾಧ್ಯಕ್ಷರ ಅಧಿಕಾರ
ಅಧ್ಯಾಯ - 4 ಕೇಂದ್ರ ನ್ಯಾಯಾಂಗ
124. ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆ ಮತ್ತು ರಚನೆ
125. ನ್ಯಾಯಾಧೀಶರ ವೇತನ ಮತ್ತು ಇತರ ವಿಷಯಗಳು
126. ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕಾತಿ
127. ತಾತ್ಕಾಲಿಕ ನ್ಯಾಯಾಧೀಶರ ನೇಮಕಾತಿ
128. ಸುಪ್ರೀಂ ಕೋರ್ಟ್ ಕಲಾಪಗಳಲ್ಲಿ ನಿವೃತ ನ್ಯಾಯಾಧೀಶರ ಹಾಜರಿ
129. ದಾಖಲೆಯ ನ್ಯಾಯಾಲಯವಾಗಿ ಸರ್ವೋಚ್ಚ ನ್ಯಾಯಾಲಯ
130. ಸರ್ವೋಚ್ಚ ನ್ಯಾಯಾಲಯದ ಕಾರ್ಯ ಸ್ಥಾಪನೆ
131. ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿ
131 a. ರದ್ದುಪಡಿಸಲಾಗಿದೆ
132. ಸರ್ವೋಚ್ಚ ನ್ಯಾಯಾಲಯದ ಅಪೀಲು (ಮನವಿ) ಅಧಿಕಾರ ವ್ಯಾಪ್ತಿ
133. ಸಿವಿಲ್ ವಿಷಯಗಳಿಗೆ ಸಂಬಂಧಿಸಿದಂತೆ ಅಪೀಲು ಅಧಿಕಾರ
134. ಕ್ರಿಮಿನಲ್ ವಿಷಯಗಳಿಗೆ ಸಂಬಂಧಿಸದಂತೆ ಸರ್ವೋಚ್ಚ ನ್ಯಾಯಾಲಯದ ಅಪೀಲು ಅಧಿಕಾರ
134 a. ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ದೃಢೀಕರಣ
135. ಒಕ್ಕೂಟ ನ್ಯಾಯಾಂಗದ ವ್ಯಾಪ್ತಿ ಮತ್ತು ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಚಲಾಯಿಸುವ
136. ಅಪೀಲು ಸಲ್ಲಿಸಲು ಸರ್ವೋಚ್ಚ ನ್ಯಾಯಲಾಯದಿಂದ ವಿಶೇಷ ಅನುಮತಿ
137. ತನ್ನ ತೀರ್ಪುಗಳನ್ನು ಅಥವಾ ಆದೇಶಗಳನ್ನು ಪುನರ್ ಪರಿಸಿಲಿಸುವ ಸರ್ವೋಚ್ಚ ನ್ಯಾಯಾಲಯದ ಅಧಿಕಾರ
138. ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿಯನ್ನು ಹೆಚ್ಚಿಸುವುದು
139. ಕೆಲವು ರಿಟ್ ಗಳನ್ನು ಹೊರದಿಸಲು ಸುಪ್ರೀಂ ಕೋರ್ಟ್ ಗೆ ನೀಡಲಾಗಿರುವ ಅಧಿಕಾರ
139 a. ಕೆಲವು ಪ್ರಕರಣಗಳ ವರ್ಗಾವಣೆ
140. ಸರ್ವೋಚ್ಚ ನ್ಯಾಯಾಲಯದ ಪೂರಕ ಅಧಿಕಾರಗಳು
141. ಎಲ್ಲಾ ನ್ಯಾಯಲಾಯಗಳಿಗೂ ಸರ್ವೋಚ್ಚ ನ್ಯಾಯಲಾಯದಿಂದ ಘೋಷಿಸಲ್ಪಟ್ಟ ಕಾನೂನುಗಳು ಅನ್ವಯಿಸುತ್ತದೆ
142. ಸುಪ್ರೀಂ ಕೋರ್ಟ್ ನ ಆದೇಶ ಮತ್ತು ಡಿಕ್ರಿ ಗಳ ಅನುಷ್ಟಾನಗೊಳಿಸುವಿಕೆ
143. ಸರ್ವೋಚ್ಚ ನ್ಯಾಯಾಲಯದ ಸಲಾಹಾಧಿಕಾರ (ರಾಷ್ಟ್ರಾಧ್ಯಕ್ಷರಿಗೆ )
144. ಸುಪ್ರೀಂ ಕೋರ್ಟ್ ಗೆ ನೆರವು ನೀಡುವ ನಾಗರೀಕ ಮತ್ತು ನ್ಯಾಯಿಕ ಪ್ರಾಧಿಕಾರಗಳು
145. ನ್ಯಾಯಾಲಯದ ನಿಯಮಗಳು ಇತರೆ
146. ಸರ್ವೋಚ್ಚ ನ್ಯಾಯಾಲಯದ ಅಧಿಕಾರಗಳು ಮತ್ತು ಸೇವಕರು ಮತ್ತು ವೆಚ್ಚ
147. ಅರ್ಥ ವಿವರಣೆ
ಅಧ್ಯಾಯ -5 ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ
148. ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ
149. ಭಾರತದ ಲೆಕ್ಕ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕನ ಕರ್ತವ್ಯಗಳು ಮತ್ತು ಅಧಿಕಾರಗಳು
150. ಕೇಂದ್ರ ಹಾಗೂ ರಾಜ್ಯಗಳ ಲೆಕ್ಕಪತ್ರ ಸಮೂನೆ
151. ಲೆಕ್ಕ ಪರಿಶೋಧನಾ ವರಧಿಗಳು
ಭಾಗ -6
ಅಧ್ಯಾಯ - 1 ರಾಜ್ಯಪಾಲರು
152. ರಾಜ್ಯದ ವ್ಯಾಖ್ಯೆ
153. ರಾಜ್ಯಗಳ ರಾಜ್ಯಪಾಲರು
154. ರಾಜ್ಯದ ಕಾರ್ಯ ನಿರ್ವಾಹಕ ಅಧಿಕಾರಿ
155. ರಾಜ್ಯಪಾಲರ ನೇಮಕ
156. ರಾಜ್ಯಪಾಲರ ಅಧಿಕಾರವಧಿ
157. ರಾಜ್ಯಪಾಲರ ಹುದ್ದೆಗೆ ಇರಬೇಕಾದ ಅರ್ಹತೆಗಳು
158. ರಾಜ್ಯಪಾಲರ ಹುದ್ದೆಯ ನಿಬಂಧನೆಗಳು
159. ರಾಜ್ಯಪಾಲರ ಪ್ರಮಾಣ ವಚನ ಸ್ವೀಕಾರ
160. ಕೆಲವು ತುರ್ತು ಸಂದರ್ಭಗಳಲ್ಲಿ ರಾಜ್ಯಪಾಲರ ಕರ್ತವ್ಯಗಳ ನಿರ್ವಹಣೆ
161. ಶಿಕ್ಷೆಯನ್ನು ಕ್ಷಮಿಸುವ, ಕಡಿಮೆ ಮಾಡುವ ಅಥವಾ ಬದಲಾಯಿಸುವ ರಾಜ್ಯಪಾಲರ ಅಧಿಕಾರ
162. ರಾಜ್ಯ ಕಾರ್ಯಾಂಗದ ಅಧಿಕಾರ ವ್ಯಾಪ್ತಿ
163. ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಮಂತ್ರಿ ಮಂಡಲ
164. ಮಂತ್ರಿಗಳಿಗೆ ಸಂಬಂಧಿಸಿದ ಇತರೆ ಉಪಯಬಂಧಗಳು
165. ರಾಜ್ಯದ ಅಡ್ವೋಕೇಟ್ ಜನರಲ್
166. ರಾಜ್ಯ ಸರ್ಕಾರದ ವ್ಯವಹರಣೆ ನಡೆಸುವಿಕೆ
167. ರಾಜ್ಯಪಾಲರಿಗೆ ಮಾಹಿತಿ ಇತ್ಯಾದಿ ಒದಗಿಸುವ ಮುಖ್ಯ ಮಂತ್ರಿಗಳ ಕರ್ತವ್ಯ
ಅಧ್ಯಾಯ -3 ರಾಜ್ಯ ಶಾಸಕಾಂಗ
168. ರಾಜ್ಯಗಳ ವಿಧಾನ ಮಂಡಲಗಳ ರಚನೆ
169. ರಾಜ್ಯಗಳ ವಿಧಾನ ಪರೀಶತಗಳ ಸೃಷ್ಟಿ ಅಥವಾ ರದ್ದತಿ
170. ವಿಧಾನ ಸಭೆಯ ರಚನೆ
171. ವಿಧಾನ ಪರಿಷತ್ ನ ರಚನೆ
172. ರಾಜ್ಯ ಶಾಸಕಾಂಗದ ಅಧಿಕಾರವಧಿ
173. ರಾಜ್ಯ ಶಾಸಕಾಂಗದ ಸದಸ್ಯತ್ವಕ್ಕೆ ಇರಬೇಕಾದ ಅರ್ಹತೆಗಳು
174. ರಾಜ್ಯ ಶಾಸಕಾಂಗದ ಅಧಿವೇಶನ ಕರೆಯುವುದು, ಮುದೂಡುವುದು ಮತ್ತು ವಿಸರ್ಜನೆ
175. ರಾಜ್ಯ ಶಾಸಕಾಂಗದ ಸದನಗಳನ್ನು ಉದ್ದೇಶಿಸಿ ಮಾತನಾಡಲು ಮತ್ತು ಸಂದೇಶವನ್ನು ಕಳುಹಿಸಲು ರಾಜ್ಯಪಾಲರಿಗೆ ಇರುವ ಹಕ್ಕು
176. ರಾಜ್ಯಪಾಲರ ವಿಶೇಷ ಭಾಷಣ
177. ಸದನಕ್ಕೆ ಸಂಬಂಧಿಸಿದಂತೆ ಮಂತ್ರಿಗಳು ಮತ್ತು ಅಡ್ವೋಕೇಟ್ ಜನರಲ್ ರವರ ಹಕ್ಕು
178. ವಿಧಾನ ಸಭೆಯ ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷ
179. ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರ ರಾಜೀನಾಮೆ ಮತ್ತು ಪದಚ್ಯುತಿ
180. ಉಪಸಭಾಧ್ಯಕ್ಷರ ಅಧಿಕಾರವಧಿ
181. ವಿಧಾನ ಸಭೆಯ ಸಭಾಧ್ಯಕ್ಷ ಮತ್ತು ಉಪಸಭಾಧ್ಯಕ್ಷರು ತಮ್ಮ ಪದಚ್ಯುತಿಗೆ ಸಂಬಂಧಿಸಿದ ನಿರ್ಣಯ ಚರ್ಚೆಯಲ್ಲಿರುವಾಗ ಸದನದ ಅಧ್ಯಕ್ಷತೆ ವಹಿಸುವಂತಿಲ್ಲ
182. ವಿಧಾನ ಪರಿಷತ್ ನ ಸಭಾಪತಿ ಮತ್ತು ಉಪ ಸಭಾಪತಿ
183. ಸಭಾಪತಿ ಮತ್ತು ಉಪ ಸಭಾಪತಿಗಳ ರಾಜೀನಾಮೆ, ಪದಚ್ಯುತಿ
184. ಉಪ ಸಭಾಪತಿ ಸಭಾಪತಿಯಾಗಿ ಕಾರ್ಯ ನಿರ್ವಹಿಸುವುದು
185. ವಿಧಾನ ಪರಿಷತ್ತಿನ ಸಭಾಪತಿ ಮತ್ತು ಉಪ ಸಭಾಪತಿಗಳು ತಮ್ಮ ಪದಚ್ಯುತಿಗೆ ಸಂಬಂಧಿಸಿದ ನಿರ್ಣಯ ಚರ್ಚೆಯಲ್ಲಿರುವಾಗ ಸದನದ ಸಧ್ಯಕ್ಷತೆ ವಹಿಸುವಂತಿಲ್ಲ
186. ಸಭಾಧ್ಯಕ್ಷ, ಉಪಸಭಾಧ್ಯಕ್ಷ, ಸಭಾಪತಿ, ಉಪಸಭಾಪತಿಗಳ ವೇತನ ಮತ್ತು ಭತ್ಯೆ
187. ರಾಜ್ಯ ಶಾಸಕಾಂಗದ ಸಚಿವಾಲಯ
188. ಶಾಸನ ಸಭೆಯ ಸದಸ್ಯರ ಪ್ರಮಾಣ ವಚನ ಸ್ವೀಕಾರ
189. ಸದನದಲ್ಲಿ ಮತದಾನ
190. ಸ್ಥಾನಗಳ ತೆರವು
191. ಸದಸ್ಯತ್ವದ ಅನಾರ್ಹತೆಗಳು
192. ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವಿಕೆ
193. ಪ್ರಮಾಣ ವಚನ ಸಸ್ವೀಕರಿಸುವುದಕ್ಕಿಂತ ಮುಂಚಿತವಾಗಿ ಸದಸ್ಯರ ಸದನದಲ್ಲಿ ಹಾಜರಾದರೆ ದಂಡ ವಿಧಿಸುವುದು
194. ಶಾಸನ ಸಭೆಗಳ, ಶಾಸಕರ ಮತ್ತು ಸಮಿತಿಗಳ ಅಧಿಕಾರಗಳು ಸೌಲಭ್ಯಗಳು ಇತರೆ.
195. ಸದಸ್ಯರ ವೇತನ ಮತ್ತು ಭತ್ಯೆಗಳು
196. ಮಸೂದೆಗಳ ಮಂಡನೆ ಮತ್ತು ಅನುಮೋದನೆಗೆ ಸಂಬಂಧಿಸಿದ ಉಪಬಂಧಗಳು
197. ಹಣಕಾಸು ಮಸೂದೆಗಳ ಹೊರತಾಗಿ ಇತರೆ ಮಸೂದೆಗಳಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನ ಅಧಿಕಾರದ ಮೇಲಿನ ನಿರ್ಬಂಧ
198. ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ವಿಶೇಷ ನಿಯಮಗಳು
199. ಹಣಕಾಸು ಮಸೂದೆಯ ವ್ಯಾಖ್ಯೆ
200 ಮಸೂದೆಗಳಿಗೆ ಒಪ್ಪಿಗೆ
201. ರಾಷ್ಟ್ರಾಧ್ಯಕ್ಷರ ಅನುಮೋದನೆಗಾಗಿ ಕಾಯ್ದಿರಿಸಲಾಗಿರುವ ಮಸೂದೆಗಳು
202. ವಾರ್ಷಿಕ ಮುಂಗಡ ಪತ್ರ
203. ಅಂದಾಜುಗಳಿಗೆ ಸಂಬಂಧಿಸಿದಂತೆ ಶಾಸಕಾಂಗದಲ್ಲಿ ನಿಯಮಗಳು
204. ವಿನಿಯೋಗ ಮಸೂದೆಗಳು
205. ಪೂರಕ ಅಧಿಕ ಅಥವಾ ಹೆಚ್ಚುವರಿ ಅನುದಾನಗಳು
206. ಲೇಖಾನುಧಾನಗಳು, ಪತ್ತಿನ ಅನುಧಾನಗಳ ಮತ್ತು ಅಸಾಧಾರಣ ಅನುದಾನಗಳು
207. ಹಣಕಾಸು ಮಸೂದೆಗೆ ಸಂಬಂಧಿಸಿದ ವಿಶೇಷ ಉಪಯಬಂಧಗಳು
208. ಪ್ರಕ್ರಿಯಾ ನಿಯಮಗಳು
209. ರಾಜ್ಯದ ವಿಧಾನ ಮಂಡಲದಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಕಾನೂನಿನ ಮೂಲಕ ನಿಯಂತ್ರಿಸುವುದು
210. ಶಾಸಕಾಂಗದಲ್ಲಿ ಉಪಯೋಗಿಸಬೇಕಾದ ಭಾಷೆಗಳು
211. ಶಾಸಕಾಂಗದ ಚರ್ಚೆಗಳ ಮೇಲಿನ ನಿರ್ಬಂಧ
212. ಶಾಸಕಾಂಗದ ಕಾರ್ಯ ಕಲಾಪಗಳನ್ನು ನ್ಯಾಯಲಾಯಗಳು ವಿಚಾರಣೆಗೆ ಒಳಪಡಿಸುವಂತಿಲ್ಲ
ಅಧ್ಯಾಯ -4 ರಾಜ್ಯಪಾಲರ ಶಾಸನಿಯ ಅಧಿಕಾರ
213. ಶಾಸಕಾಂಗವು ಅಧಿವೇಶನದಲ್ಲಿ ಇಲ್ಲದಿರುವಾಗ ಸುಗ್ರೀವಾಜ್ಞೆಗಳನ್ನು ಹೊರಡಿಸುವುದು ರಾಜ್ಯಪಾಲರ ಅಧಿಕಾರ
ಅಧ್ಯಾಯ -5 ರಾಜ್ಯದಲ್ಲಿ ಉಚ್ಚ ನ್ಯಾಯಾಲಯ
214. ರಾಜ್ಯಗಳಿಗೆ ಉಚ್ಚ ನ್ಯಾಯಲಾಯಗಳು
215. ಉಚ್ಚ ನ್ಯಾಯಲಾಯಗಳು ದಾಖಲೆ ನ್ಯಾಯಾಲಯಗಳಾಗತಕ್ಕದು
216. ಹೈಕೋರ್ಟ್ ಗಳ ರಚನೆ
217. ಹೈ ಕೋರ್ಟ್ ನ್ಯಾಯಾಧೀಶರ ಹುದ್ದೆಯ ನೇಮಕಾತಿ ಮತ್ತು ನಿಬಂಧನೆಗಳು
218. ಸುಪ್ರೀಂ ಕೋರ್ಟ್ ಗೆ ಸಂಬಂಧಿಸಿದ ಕೆಲವು ಉಪಯಬಂಧಗಳನ್ನು ಹೈಕೋರ್ಟ್ ಗಳಿಗೆ ಅನ್ವಹಿಸುವುದು
219. ಹೈಕೋರ್ಟ್ ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರ
220. ಶಾಶ್ವತ ನ್ಯಾಯಾಧೀಶರ ಅಧಿಕಾರವಧಿ ಮುಗಿದ ನಂತರ ವಕೀಲ ವೃತ್ತಿ ಪಾಲಿಸದಂತೆ ನಿರ್ಭಂದ
221. ನ್ಯಾಯಾಧೀಶರ ವೇತನ ಮತ್ತು ಇತರ
222. ಒಂದು ಹೈಕೋರ್ಟ್ ನಿಂದ ಇನ್ನೊಂದು ಹೈಕೋರ್ಟ್ ಗೆ ನ್ಯಾಯಾಧೀಶರ ವರ್ಗಾವಣೆ
223. ಹಂಗಾಮಿ ಮುಖ್ಯ ನ್ಯಾಯಾಧೀಶರ ನೇಮಕ
224. ಹೆಚ್ಚುವರಿ ಮತ್ತು ಹಂಗಾಮಿ ನ್ಯಾಯಾಧೀಶರ ನೇಮಕಾತಿ
225. ಪ್ರಸ್ತುತ ಹೈಕೋರ್ಟ್ ಗಳ ವ್ಯಾಪ್ತಿ
226. ಕೆಲವು ರಿಟ್ ಗಳನ್ನು ನೀಡುವ ಹೈಕೋರ್ಟ್ ಗಳ ಅಧಿಕಾರ
226 a. ರದ್ದುಪಡಿಸಲಾಗಿದೆ
227. ಎಲ್ಲಾ ನ್ಯಾಯಾಲಯಗಳ ಮೇಲೆ ಹೈಕೋರ್ಟ್ ಗಳ ಮೇಲ್ವಿಚಾರಣೆ
228. ಹೈಕೋರ್ಟ್ ಗಳಿಗೆ ಕೆಲವು ಪ್ರಕರಣಗಳ ವರ್ಗಾವಣೆ
229. ಹೈಕೋರ್ಟ್ ಗಳ ಅಧಿಕಾರಿಗಳು, ಸೇವಕರು, ಮತ್ತು ವೆಚ್ಚ
230. ಕೇಂದ್ರಾಡಳಿತ ಪ್ರದೇಶಗಳಿಗೆ ಹೈಕೋರ್ಟ್ ಗಳ ವ್ಯಾಪ್ತಿ ವಿಸ್ತರಣೆ
231. ಎರಡು ಅಥವಾ ಹೆಚ್ಚು ರಾಜ್ಯಗಳಿಗೆ ಒಂದೇ ಹೈಕೋರ್ಟ್ ಸ್ಥಾಪನೆ
232. ರದ್ದುಪಡಿಸಲಾಗಿದೆ
ಅಧ್ಯಾಯ -6 ಅಧೀನ ನ್ಯಾಯಲಾಯಗಳು
233. ಜೀಲಯ ನ್ಯಾಯಾಧೀಶರ ನೇಮಕ
233 a. ಕೆಲವು ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಮತ್ತು ಅವರು ನೀಡಿರುವ ತೀರ್ಪು ಇತ್ಯಾದಿಗಳ ಸಿಂಧುತ್ವ
234. ನ್ಯಾಯಿಕ ಸೇವೆಗಳಿಗೆ ಜಿಲ್ಲಾ ನ್ಯಾಯಾಧೀಶರನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳ ನೇಮಕಾತಿ
235. ಅಧೀನ ನ್ಯಾಯಾಲಯಗಳ ಮೇಲೆ ನಿಯಂತ್ರಣ
236. ಅರ್ಥ ವಿವರಣೆ
237. ಕೆಲವು ದರ್ಜೆ ಅಥವಾ ದರ್ಜೆಗಳ ಮ್ಯಾಜಿಸ್ಟ್ರೇಟರುಗಳಿಗೆ ಈ ಅಧ್ಯಾಯದ ಉಪಯಬಂಧಗಳ ಅನ್ವಯ
238. ರದ್ದುಪಡಿಸಲಾಗಿದೆ.
ಭಾಗ -8
ಕೇಂದ್ರಾಡಳಿತ ಪ್ರದೇಶಗಳು
239. ಕೇಂದ್ರಾಡಳಿತ ಪ್ರದೇಶಗಳ ಆಡಳಿತ
239 a. ಕೆಲವು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಥಳೀಯ ಶಾಸಕಾಂಗವನ್ನು ಅಥವಾ ಮಾತೃ ಮಂಡಲವನ್ನು ಅಥವಾ ಎರಡನ್ನು ರಚಿಸುವುದು
239 a a. ದೆಹಲಿಗೆ ಸಂಬಂಧಿಸಿದ ವಿಶೇಷ ಉಪಯಬಂಧಗಳು
239 b. ಶಾಸಕಾಂಗ ಅಧಿವೇಶನದಲ್ಲಿ ಇಲ್ಲದಾಗ ಸುಗ್ರೀವಾಜ್ಞೆ ಗಳನ್ನು ಹೊರಡಿಸುವ ಆಡಳಿತಗಾರನ ಅಧಿಕಾರ
240. ಕೆಲವು ಕೇಂದ್ರಾಡಳಿತ ಪ್ರದೇಶಗಳಿಗೆ ನಿಯಮಗಳನ್ನು ರೂಪಿಸುವ ರಾಷ್ಟ್ರಾಧ್ಯಕ್ಷರ ಅಧಿಕಾರ
241. ಕೇಂದ್ರಾಡಳಿತ ಪ್ರದೇಶಗಳಿಗೆ ಉಚ್ಚ ನ್ಯಾಯಲಾಯಗಳು
242. ರದ್ದುಪಡಿಸಲಾಗಿದೆ.
ಭಾಗ -9
ಪಂಚಾಯ್ತಿಗಳು
243. ವ್ಯಾಖ್ಯೆಗಳು
243 a. ಗ್ರಾಮ ಸಭೆ
243 b. ಪಂಚಾಯತಿ ರಚನೆ
243 c. ಪಂಚಾಯತಿಗಳ ಅಂಗ ರಚನೆ
243 d. ಸ್ಥಾನ ಮೀಸಲಾತಿ
243 E. ಪಂಚಯಿತಿಗಳ ಅವಧಿ
243 F. ಸದಸ್ಯತ್ವ ಅನರ್ಹತೆಗಳು
243 G. ಪಂಚಯಿತಿಗಳ ಅಧಿಕಾರ ಮತ್ತು ಜವಾಬ್ದಾರಿ
243 H. ತೇರಿಗೆಗಳನ್ನು ವಿಧಿಸುವ ಪಂಚಾಯಿತಿಯ ಅಧಿಕಾರ ಮತ್ತು ಅವುಗಳ ನಿಧಿಗಳ ಹಣಕಾಸು
243 I. ಹಣಕಾಸು ಆಯೋಗದ ರಚನೆ
243 J ಪಂಚಾಯಿತಿಯ ಲೆಕ್ಕ ಪರಿಶೀಲನೆ
243 K. ಪಂಚಾಯಿತಿ ಚುನಾವಣೆಗಳು
243 L. ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಹಿಸುವುದು
243 M. ಪಂಜಾಯಿತಿ ರಾಜ್ ಕಾಯ್ದೆ ಅನ್ವಯವಾಗದ ಕೆಲವು ಭಾಗಗಳು
243 N. ಆಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಪಂಚಾಯತಿಗಳ ಮುಂದುವರಿಕೆ
243 O. ಚುನಾವಣಾ ವಿಷಯಗಳಲ್ಲಿ ನ್ಯಾಯಲಾಯಗಳು ಹಸ್ತಕ್ಷೇಪ ಮಾಡುವಂತೆ ನಿರ್ಬಂಧ
ಭಾಗ -9 A - ಮುನ್ಸಿಪಾಲಿಟಿಗಳು
243 P. ವ್ಯಾಖ್ಯೆಗಳು
243 Q ಮುನ್ಸಿಪಾಲಿಟಿಗಳ ರಚನೆ
243 R ಮುನ್ಸಿಪಾಲಿಟಿಗಳ ಅಂಗ ರಚನೆ
243 S. ವಾರ್ಡ್ ಸಮಿತಿಗಳ ರಚನೆ
243 T. ಸ್ಥಾನ ಮೀಸಲಾತಿ
243 U. ಮುನ್ಸಿಪಾಲಿಟಿಗಳ ಅಧಿಕಾರವಧಿ
243 V. ಸದಸ್ಯತ್ವದ ಅನರ್ಹತೆಗಳು
243 W. ಮುನ್ಸಿಪಾಲಿಟಿಗಳ ಅಧಿಕಾರ ಮತ್ತು ಜವಾಬ್ದಾರಿಗಳು ಇತರೆ
243 X. ತೇರಿಗೆಗಳನ್ನು ವಿಧಿಸಲು ಮುನ್ಸಿಪಾಲಿಟಿಗಳಿಗೆ ಇರುವ ಅಧಿಕಾರ, ಮುನ್ಸಿಪಾಲಿಟಿಗಳ ನಿಧಿ
243 Y. ಹಣಕಾಸು ಆಯೋಗ
243 Z. ಮುನಿಸಿಪಾಲಿಟಿಗಳ ಲೆಕ್ಕ ಪರಿಶೋಧನೆ
243 ZA. ಮುನಿಸಿಪಾಲಿಟಿಗಳ ಚುನಾವಣೆಗಳು
243 ZB. ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ
243 ZC. ಈ ಭಾಗ ಅನ್ವಯಿಸದೆ ರುವ ಕೆಲವು ಪ್ರದೇಶಗಳು
243 ZD. ಜಿಲ್ಲಾ ಯೋಜನಾ ಸಮಿತಿ
243 ZE. ಮೆಟ್ರೊ ಪಾಲಿಟನ್ ಯೋಜನಾ ಸಮಿತಿ
243 ZF. ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ಮುನಿಸಿಪಾಲಿಟಿಗಳ ಮುಂದುವರೆಯುವಿಕೆ
243 ZG. ಚುನಾವಣಾ ವಿಷಯದಲ್ಲಿ ನ್ಯಾಯಾಲಯಗಳ ಮಧ್ಯ ಪ್ರವೇಶದ ಮೇಲಿನ ನಿರ್ಬಂಧ
ಭಾಗ -9 B - ಸಹಕಾರ ಸಂಘ
243 ZH. ವ್ಯಾಖ್ಯೆಗಳು
243 ZI. ಸಹಕಾರಿ ಸಂಘಗಳ ಸ್ಥಾಪನೆ ಮತ್ತು ಇತ್ಯಾದಿ
243 ZJ. ಮಂಡಳಿಯ ಸದಸ್ಯರು ಮತ್ತು ಅದರ ಪದಾಧಿಕಾರಿಗಳ ಸಂಖ್ಯೆ ಮತ್ತು ಅಧಿಕಾರವಧಿ
243 ZK. ಮಂಡಳಿ ಸದಸ್ಯರ ಚುನಾವಣೆ
243 ZL. ಮಂಡಳಿಯ ವಿಸರ್ಜನೆ, ಅಮಾನತು ಮತ್ತು ಮಧ್ಯಂತರ ನಿರ್ವಹಣೆ
243 ZM. ಸಹಕಾರಿ ಸಂಘಗಳ ಲೆಕ್ಕ ಪರಿಶೋಧನೆ
243 ZN. ಸಾಮಾನ್ಯ ಸಭೆ ಕರೆಯುವುದು
243 ZO. ಮಾಹಿತಿ ಪಡೆಯಲು ಸದಸ್ಯರು ಹೊಂದಿರುವ ಹಕ್ಕು
243 ZP. ರಿಟರ್ನ್
243 ZQ. ಉಲ್ಲೇಖನೆಗಳು ಮತ್ತು ದಂಡಗಳು
243 ZR. ಬಹು ರಾಜ್ಯ ಸಹಕಾರಿ ಸಂಘಗಳಿಗೆ ಅನ್ವಯ
243 ZS. ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯ
243 ZT. ಆಸ್ತಿತ್ವದಲ್ಲಿರುವ ಕಾನೂನುಗಳ ಮುಂದುವರೆಯುವಿಕೆ
ಭಾಗ - 10
ಅನುಸೂಚಿತ ಮತ್ತು ಬುಡಕಟ್ಟು ಪ್ರದೇಶಗಳು
244. ಅನುಸೂಚಿತ ಪ್ರದೇಶಗಳು ಮತ್ತು ಬುಡಕಟ್ಟು ಪ್ರದೇಶಗಳ ಆಡಳಿತ
244 A. ಅಸ್ಸಾಂ ನಲ್ಲಿರುವ ಕೆಲವು ಬುಡಕಟ್ಟು ಪ್ರದೇಶಗಳಿಂದ ಕೊಡಿದ ಒಂದು ಸ್ವಾಯತ್ತ ರಾಜ್ಯದ ಸ್ಥಾಪನೆ ಮತ್ತು ಸ್ಥಳೀಯ ಶಾಸಕಾಂಗ ಅಥವಾ ಕಾರ್ಯಾಂಗ ಅಥವಾ ಎರಡರ ರಚನೆ
ಭಾಗ - 11
ಕೇಂದ್ರ ರಾಜ್ಯ ಸಂಬಂಧಗಳು
ಅಧ್ಯಾಯ -1- ಶಾಸನಿಯ ಸಂಬಂಧಗಳು
245. ಸಂಸತ್ತಿನಿಂದ ಗಾಹು ರಾಜ್ಯ ಶಾಸಕಾಂಗಗಳಿಂದ ರೂಪಿಸಲ್ಪಟ್ಟ ಕಾನೂನುಗಳ ವ್ಯಾಪ್ತಿ
246. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಂದ ರೂಪಿಸಲ್ಪಟ್ಟ ಕಾನೂನಿನ ವಿಷಯ ವಸ್ತು
247. ಕೆಲವು ಹೆಚ್ಚುವರಿ ನ್ಯಾಯಾಲಯಗಳ ಸ್ಥಾಪನೆಗೆ ಅವಕಾಶ ನೀಡುವ ಸಂಸತ್ತಿನ ಅಧಿಕಾರ
248. ಕಾನೂನು ರಚನೆಗೆ ಸಂಬಾಧಿಸಿದಂತೆ ಶೇಷಾಧಿಕಾರಗಳು
249. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ರಾಜ್ಯ ಮಟ್ಟದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ಶಾಸನಗಳನ್ನು ರೂಪಿಸುವ ಸಂಸತ್ತಿನ ಅಧಿಕಾರ
250. ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ರಾಜ್ಯ ಮಟ್ಟದಲ್ಲಿರುವ ಯಾವುದೇ ವಿಷಯಕ್ಕೆ ಸಂಬಾಧಿಸಿದಂತೆ ಶಾಸನ ರಚಿಸುವ ಸಂಸತ್ತಿನ ಅಧಿಕಾರ
251. 249 ವಿಧಿ ಮತ್ತು 250 ವಿಧಿಗಳ ಅಡಿಯಲ್ಲಿ ಸಂಸತ್ತಿನಿಂದ ರೂಪಿಸಲ್ಪಟ್ಟ ಕಾನೂನು ಮತ್ತು ರಾಜ್ಯ ಶಾಸಕಾಂಗಗಳಿಂದ ರೂಪಿಸಲ್ಪಟ್ಟ ಕಾನೂನುಗಳ ನಡುವಣ ಅಸಾಂಗತ್ಯ
252 . ಒಪ್ಪಿಗೆಯ ಮೇರೆಗೆ ಎರಡು ಅಥವಾ ಹೆಚ್ಚು ರಾಜ್ಯಗಳಿಗಾಗಿ ಕಾನೂನು ರೂಪಿಸುವ ಸಂಸತ್ತಿನ ಅಧಿಕಾರ ಹಾಗೂ ಇತರೆ ರಾಜ್ಯಗಳಿಂದ ಅಂತಹ ಕಾನೂನಿನ ಅಳವಡಿಕೆ
253. ಅಂತರಾಷ್ಟ್ರೀಯ ಒಪ್ಪಂದಗಳನ್ನು ಜಾರಿಗೊಳಿಸಲು ರೂಪಿಸಲಾಗುವ ಶಾಸನಗಳು
254. ಸಂಸತ್ತಿನಿಂದ ಮತ್ತು ರಾಜ್ಯ ಶಾಸಕಾಂಗಗಳಿಂದ ರೂಪಿಸಲ್ಪಟ್ಟ ಕಾನೂನುಗಳ ನಡುವಣ ಅಸಾಂಗತ್ಯ
255. ಶಿಫಾರಸ್ಸುಗಳು ಮತ್ತು ಪೂರ್ವ ಮಂಜೂರಾತಿಗಳಿಗೆ ಸಂಬಂಧಿಸಿದ ಆವಶ್ಯಕತೆಗಳನ್ನು ಕೇವಲ ಪ್ರಕ್ರಿಯೆಗೆ ಸಂಬಂಧಿಸಿದ ವಿಷಯಗಳಂತೆ ಪರಿಗಣಿಸುವುದು
ಅಧ್ಯಾಯ -2- ಆಡಳಿತಾತ್ಮಕ ಸಂಬಂಧಗಳು
256. ರಾಜ್ಯ ಹಾಗೂ ಕೇಂದ್ರದ ಬಾಧ್ಯತೆಗಳೂ
257. ಕೆಲವು ಪ್ರಕರಣಗಳಲ್ಲಿ ರಾಜ್ಯಗಳ ಮೇಲೆ ಕೇಂದ್ರದ ನಿಯಂತ್ರಣ
257 A. ರದ್ದುಪಡಿಸಲಾಗಿದೆ
258. ಕೆಲವಿ ಸಂದರ್ಭಗಳಲ್ಲಿ ರಾಜ್ಯಗಳಿಗೆ ಅಧಿಕಾರ ನೀಡುವ ಕೇಂದ್ರದ ಅಧಿಕಾರ
258 A. ಕೇಂದ್ರಕ್ಕೆ ಕಾರ್ಯಗಳನ್ನು ವಹಿಸುವ ರಾಜ್ಯಗಳ ಅಧಿಕಾರ
259. ರದ್ದುಪಡಿಸಲಾಗಿದೆ
260. ಭಾರತದ ಹೊರಗಿನ ಪ್ರದಶದ ಮೇಲೆ ಕೇಂದ್ರದ ವ್ಯಾಪ್ತಿ
261. ಸಾರ್ವಜನಿಕ ಕಾಯ್ದೆಗಳು, ದಾಖಲೆಗಳು ಮತ್ತು ನ್ಯಾಯಾಂಗ ಕಾರ್ಯಕಲಾಪಗಳು
262. ಅಂತರಾಜ್ಯ ನದಿ ನೀರು ಅಥವಾ ನದಿ ಕಣಿವೆಗೆ ಸಂಬಧಿಸಿದ ವಿವಾದಗಳ ಇತ್ಯಾರ್ಥ
263. ಅಂತರ ರಾಜ್ಯ ಮಂಡಳಿಗೆ ಸಂಬಂಧಿಸಿದ ಉಪಯಬಂಧಗಳು
ಭಾಗ - 12
ಹಣಕಾಸು, ಸ್ವತ್ತು, ಕರಾರುಗಳು ಮತ್ತು ದಾವೆಗಳು
264. ಅರ್ಥ ವಿವರಣೆ
265 . ಕಾನೂನು ಪ್ರಾಧಿಕಾರದ ಹೊರತಾಗಿ ಬೇರಾವ ರೀತಿಯಲ್ಲಿಯೂ ತೇರಿಗೆಗಳನ್ನು ವಿಧಿಸುವಂತಿಲ್ಲ
266. ಭಾರತ ಮತ್ತು ರಾಜ್ಯಗಳ ಸಂಚಿತ ನಿಧಿಗಳು ಮತ್ತು ಸರ್ಕಾರಿ ಲೆಕ್ಕಪತ್ರಗಳು
267. ತುರ್ತು ನಿಧಿ ಅಥವಾ ಸಾದಿಲ್ವಾರು ನಿಧಿ
268. ಕೇಂದ್ರದಿಂದ ವಿಧಿಸಲ್ಪಟ್ಟ ರಾಜ್ಯಗಳಿಂದ ಸಂಗ್ರಹಿಸಲ್ಪಟ್ಟು ವಿನಿಯೋಗಿಸಲ್ಪಡುವ ತೇರಿಗೆಗಳು
269. ಕೇಂದ್ರದಿಂದ ವಿಧಿಸಲ್ಪಟ್ಟ ಹಾಗೂ ಸಂಗ್ರಹಿಸಲ್ಪಟ್ಟ, ರಾಜ್ಯಗಳಿಗೆ ನೀಡಲಾಗುವ ತೇರಿಗೆಗಳು
270. ಕೇಂದ್ರ ಹಾಗೂ ರಾಜ್ಯಗಳಿಂದ ವಿಧಿಸಲ್ಪಟ್ಟು, ಇವೆರಡರ ನಡುವೆ ಹಂಚಿಕೆಯಾಗುವ ತೇರಿಗೆಗಳು
271. ಒಕ್ಕೂಟದ ಉದ್ದೇಶಗಳಿಗಾಗಿ ಕೆಲವು ಸುಂಕಗಳ ಮತ್ತು ತೆರಿಗೆಗಳ ಮೇಲೆ ಅಧಿಕಭಾರ
272. ರದ್ದುಪಡಿಸಲಾಗಿದೆ
273. ಸೆಣಬು ಮತ್ತು ಸೆಣಬಿನ ಉತ್ಪನ್ನಗಳ ಮೇಲೆ ರಫ್ತು ಸುಂಕಕ್ಕೆ ಬದಲಾಗಿ ಅನುದಾನಗಳು
274. ರಾಜ್ಯಗಳ ಹಿತಾಶಕ್ತಿ ಒಳಗೊಂಡಿರುವ ತೆರಿಗೆಗೆ ಸಂಬಂಧಿಸಿದ ಮಸೂದೆಗಳಿಗೆ ರಾಷ್ಟ್ರಾಧ್ಯಕ್ಷರ ಪೂರ್ವಾನುಮತಿ ಅಗತ್ಯ
275. ಕೆಲವು ರಾಜ್ಯಗಳಿಗೆ ಕೇಂದ್ರದಿಂದ ಅನುದಾನ
276. ವೃತ್ತಿ, ವ್ಯಾಪಾರ ಮತ್ತು ಉದ್ಯೋಗಗಳ ಮೇಲೆ ತೆರಿಗೆ
277. ಉಳಿಸುವುಕೆಗಳು
278. ರದ್ದುಪಡಿಸಲಾಗಿದೆ
279. ನಿವ್ವಳ ಉತ್ಪನ್ನಗಳು ಮುಂತಾದವುಗಳನ್ನು ಲೆಕ್ಕ ಹಾಕುವುದು
280. ಹಣಕಾಸು ಆಯೋಗ
281. ಹಣಕಾಸು ಆಯೋಗದ ಶಿಪಾರಸುಗಳು
282. ಒಕ್ಕೂಟವೂ ಅಥವಾ ಒಂದು ರಾಜ್ಯವು ತನ್ನ ರಾಜಸ್ವಾಗಳಿಂದ ಭರಿಸಬಹುದಾದ ವೆಚ್ಚ
283. ಸಂಚಿತ ನಿಧಿಗಳ, ತುರ್ತು ನಿಧಿಗಳ, ಅಭಿರಕ್ಷೆ
284. ಸಾರ್ವಜನಿಕ ನೌಕರರು ಮತ್ತು ನ್ಯಾಯಾಲಯಗಳಿಂದ ಸ್ವೀಕರಿಸುವ ಹಣದ ಅಭಿರಕ್ಷೆ
285. ಕೇಂದ್ರದ ಆಸ್ತಿಗೆ ರಾಜ್ಯದ ತೇರಿಗೆಯಿಂದ ವಿನಾಯ್ತಿ
286. ವಸ್ತುಗಳನ್ನು ಮಾರುವುದು ಮತ್ತು ಕೊಳ್ಳುವುದರ ಮೇಲಿನ ತೆರಿಗೆ ವಿಧಿಸುವುದಕ್ಕೆ ಸಂಬಂಧಿಸಿದ ನಿರ್ಬಂಧ
287. ವಿದ್ಯುಚ್ಛಕ್ತಿ ಮೇಲೆ ತೆರಿಗೆ ವಿನಾಯಿತಿ
288. ಕೆಲವು ಪ್ರಕರಣಗಳಲ್ಲಿ ರಾಜ್ಯವು ನೀರು ಮತ್ತು ವಿದ್ಯುಚ್ಛಕ್ತಿಯ ಮೇಲೆ ತೆರಿಗೆ ವಿಧಿಸುವಂತಿಲ್ಲ
289. ರಾಜ್ಯದ ಆಸ್ತಿಯ ಮತ್ತು ಅದಾಯದ ಮೇಲೆ ಕೇಂದ್ರದ ತೆರಿಗೆಯಿಂದ ವಿನಾಯಿತಿ
290. ಕೆಲವು ವೆಚ್ಚಗಳು ಮತ್ತು ಪಿಂಚಣಿಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆ
290 A. ಕೆಲವು ದೇವಸ್ವ ನಿಧಿಗಳಿಗೆ ವಾರ್ಷಿಕ ಸಂದಾಯ
291 . ರದ್ದುಪಡಿಸಲಾಗಿದೆ
ಅಧ್ಯಾಯ - 2 ಸಾಲ ಪಡೆಯುವುದು
292. ಭಾರತ ಸರ್ಕಾರ ಸಾಲ ಪಡೆಯುವುದು
293. ರಾಜ್ಯಗಳ ಸಾಲ ಪಡೆಯುವುದು
ಅಧ್ಯಾಯ -3 3 ಸ್ವತ್ತು, ಕರಾರುಗಳು, ಹಕ್ಕುಗಳು, ಹೊಣೆಗಾರಿಕೆಗಳು ಬಾಧ್ಯತೆಗಳೂ ಮತ್ತು ದಾವೆಗಳು
294. ಕೆಲವು ಸಂದರ್ಭಗಳಲ್ಲಿ ಸ್ವತ್ತು, ಆಸ್ತಿ, ಹಕ್ಕು, ಹೊಣೆಗಾರಿಕೆ ಮತ್ತು ಬಾದ್ಯತೆ - ಇವುಗಳಿಗೆ ಉತ್ತರಾಧಿಕಾರ
295. ಇತರ ಸಂದರ್ಭಗಳಲ್ಲಿ ಸ್ವತ್ತು, ಆಸ್ತಿ, ಹಕ್ಕು, ಹೊಣೆಗಾರಿಕೆ ಮತ್ತು ಬಾಧ್ಯತೆ ಇವುಗಳಿಗೆ ಉತ್ತರಾಧಿಕಾರ
296. ರಾಜಗಾಮಿತ್ವ ಅಥವಾ ರದ್ದತಿ ಅಥವಾ ಸ್ವಾಮಿರಹಿತತೆ - ಇವುಗಳಿಂದ ಓದಗಿಬರುವ ಸ್ವತ್ತು
297. ರಾಜ್ಯ ಕ್ಷೇತ್ರೀಯ ಸಮುದ್ರದಲ್ಲಿ ಅಥವಾ ಕಾಂಟಿನೆಂಟಲ್ ಶೆಲಪಗಳಲ್ಲಿನ ಬೆಲೆಬಾಳುವ ವಸ್ತುಗಳು ಅನನ್ಯ ಆರ್ಥಿಕ ವಲಯದ ಸಂಪನ್ಮೂಲಗಳು ಒಕ್ಕೂಟದಲ್ಲಿ ನಿಹಿತವಾಗತಕ್ಕದ್ಡು
298. ವ್ಯಾಪಾರ ಮುಂತಾದವುಗಳನ್ನು ನಡೆಸಲು ಅಧಿಕಾರ
299. ಕರಾರುಗಳು
300. ದಾವೆಗಳು ಮತ್ತು ವ್ಯವಹಾರಣೆಗಳು
ಅಧ್ಯಾಯ - 4 ಆಸ್ತಿಯ ಹಕ್ಕು
300 A. ಕಾನೂನಿನ ಆಧಿಕಾರವಿಲ್ಲದೆ ವ್ಯಕ್ತಿಗಳ ಆಸ್ತಿಯನ್ನು ಕಸಿದುಕೊಳ್ಳುವಿಕೆ
ಭಾಗ -13
ಭಾರತ ಭೂ ಪ್ರದೇಶದೊಳಗೆ ವ್ಯಾಪಾರ, ವಾಣಿಜ್ಯ ಮತ್ತು ಸಂಪರ್ಕ
301. ವ್ಯಾಪಾರ, ವಾಣಿಜ್ಯ ಮತ್ತು ಸಂಪರ್ಕಗಳ ಸ್ವಾತಂತ್ರ್ಯ
302. ವ್ಯಾಪಾರ, ವಾಣಿಜ್ಯ ಮತ್ತು ವ್ಯವಹಾರಗಳ ಮೇಲೆ ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ
303. ವ್ಯಾಪಾರ ಮತ್ತು ವಾಣಿಜ್ಯಗಳಿಗೆ ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯಗಳ ಶಾಸನಗಳ ಮೇಲಿನ ನಿರ್ಬಂಧ
304. ರಾಜ್ಯಗಳ ನಡುವಿನ ವ್ಯಾಪಾರ, ವಾಣಿಜ್ಯ ಮತ್ತು ಸಂಪರ್ಕಗಳ ಮೇಲಿನ ನಿರ್ಬಂಧ
305. ಆಸ್ತಿತ್ವದಲ್ಲಿರುವ ಕಾನೂನುಗಳ ಮತ್ತು ರಾಜ್ಯದ ಏಕಸ್ವಾಮ್ಯದ, ಬಗ್ಗೆ ಉಪಯಬಂಧಿಸುವ ಕಾನೂನುಗಳ ಉಳಿಸುವಿಕೆ
306. ರದ್ದುಪಡಿಸಲಾಗಿದೆ
307. 301ನೇ ವಿಧಿ ಮತ್ತು 304 ನೇ ವಿಧಿಗಳಲ್ಲಿ ನಿರ್ದಿಷ್ಟಪಡಿಸಲಾಗಿರುವ ಉದ್ದೇಶಗಳನ್ನು ಪೂರೈಸಲು ಒಂದು ಪ್ರಾಧಿಕಾರದ ನೇಮಕ
ಭಾಗ - 14
ಒಕ್ಕೂಟ ಮತ್ತು ರಾಜ್ಯಗಳ ಅಧೀನದಲ್ಲಿನ ಸೇವೆಗಳು
ಅಧ್ಯಾಯ -1 - ಸೇವೆಗಳು
308. ಅರ್ಥ ವಿವರಣೆ
309. ಕೇಂದ್ರ ಮತ್ತು ಒಂದು ರಾಜ್ಯದ ನಾಗರೀಕ ಸೇವಾ ವರ್ಗದ ಸೆಮಕಾತಿ ಮತ್ತು ನಿಯಮಗಳು
310. ಸೇವಾವಧಿ
311. ವಜಾ, ಪದಚ್ಯುತಿ
312. ಅಖಿಲ ಭಾರತ ಸೇವೆಗಳು
312 A. ಕೆಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಸೇವಾ ನಿಯಮವನ್ನು ವ್ಯತ್ಯಾಸಗೊಳಿಸುವ ಅಥವಾ ಹಿಂದಕ್ಕೆ ಪಡೆದುಕೊಳ್ಳುವ ಸಂಸತ್ತಿನ ಅಧಿಕಾರ
313. ಮಧ್ಯಕಾಲೀನ ಉಪಯಬಂಧಗಳು
314. ರದ್ದುಪಡಿಸಲಾಗಿದೆ
ಅಧ್ಯಾಯ -2 - ಲೋಕಸೇವಾ ಆಯೋಗಗಳು
315. ಕೇಂದ್ರ ಮತ್ತು ರಾಜ್ಯಗಳ ಲೋಕ ಸೇವಾ ಆಯೋಗಗಳು
316. ಸದಸ್ಯರ ನೇಮಕಾತಿ ಮತ್ತು ಅಧಿಕಾರಾವಧಿ
317. ಲೋಕ ಸೇವಾ ಆಯೋಗಗಳ ಸದಸ್ಯರ ಪಡೆಚ್ಯುತಿ ಮತ್ತು ಅಮಾನತು
318. ಆಯೋಗದ ಸದಸ್ಯರು ಮತ್ತು ಸಿಬ್ಬಂದಿಯ ಸೇವಾ ನಿಯಮಗಳಿಗೆ ಸಂಬಂಧಿಸಿದಂತೆ ಕಾನೂನು ರೂಪಿಸುವ ಅಧಿಕಾರ
319. ಅಧಿಕಾರವಧಿ ಮುಗಿದ ನಂತರ ಆಯೋಗದ ಸದಸ್ಯರು ಇತರೆ ಹುದ್ದೆಗಳನ್ನು ಸ್ವೀಕರಿಸದಂತೆ ನಿಷೇಧ
320. ಲೋಕಸೇವಾ ಆಯೋಗಗಳ ಕಾರ್ಯಗಳು
321. ಲೋಕ ಸೇವಾ ಆಯೋಗಗಳ ಕಾರ್ಯಗಳನ್ನು ವಿಸ್ತರಿಸುವ ಅಧಿಕಾರ
322. ಲೋಕಸೇವಾ ಆಯೋಗಗಳ ವೆಚ್ಚಗಳು
323. ಲೋಕಸೇವಾ ಆಯೋಗದ ವರದಿ
ನ್ಯಾಯಾಧಿಕಾರ
323 A. ಆಡಳಿತ ನ್ಯಾಯಾಧಿಕಾರಗಳು
323 B. ಇತರೆ ವಿಷಯಗಳಿಗಾಗಿ ನ್ಯಾಧಿಕಾರಗಳು
ಭಾಗ - 14
ಚುನಾವಣೆಗಳು
324. ಚುನಾವಣೆಗಳ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣಾಧಿಕಾರಗಳು ಚುನಾವಣಾ ಆಯೋಗದಲ್ಲಿ ನೆಲೆಸಿರತಕ್ಕಡದ್ಡು.
325. ಧರ್ಮ, ಜಾತಿ, ಜನಾಂಗ ಅಥವಾ ಲಿಂಗದ ಆಧಾರದ ಮೇಲೆ ಮತದಾನದ ಹಕ್ಕನ್ನು ನೀಡುವಲ್ಲಿ ತಾರತಮ್ಯ ಮಾಡುವಂತಿಲ್ಲ
326. ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಿಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ದತಿಯ ಆಧಾರದ ಮೇಲೆ ಚುನಾವಣೆ ನಡಸತಕ್ಕದ್ಡು
327. ವಿಧಾನ ಮಂಡಲಗಳ ಚುನಾವಣೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಸಂಸತ್ತಿನ ಅಧಿಕಾರ
328. ರಾಜ್ಯ ವಿಧಾನಮಂಡಲದ ಚುನಾವಣೆಗಳ ಬಗೆಗೆ ಉಪಬಂಧವನ್ನು ಮಾಡಲು ಅಂಥ ವಿಧಾನ ಮಂಡಲದ ಅಧಕಾರ
329. ಚುನಾವಣಾ ವಿಷಯಗಳಲ್ಲಿ ನ್ಯಾಯಾಲಯಗಳ ಹಸ್ತಕ್ಷೇಪ ಮೇಲಿರುವ ನಿರ್ಬಂಧ
329 A . ರದ್ದು ಪಡಿಸಲಾಗಿದೆ.
ಭಾಗ - 16
ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ಉಪಯಬಂಧಗಳು
330 . ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದಾಗಳಿಗೆ ಲೋಕಸಭೆಯಲ್ಲಿ ಮೀಸಲಾತಿ
331. ಆಂಗ್ಲೊ - ಇಂಡಿಯನ್ ಸಮುದಾಯಕ್ಕೆ ಲೋಕಸಭೆಯಲ್ಲಿ ಮೀಸಲಾತಿ
332. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದಾಗಳಿಗೆ ರಾಜ್ಯ ವಿಧಾನ ಸಭೆಯಲ್ಲಿ ಮೀಸಲಾತಿ
333. ಆಂಗ್ಲೊ - ಇಂಡಿಯನ್ ಸಮುದಾಯಕ್ಕೆ ರಾಜ್ಯ ವಿಧಾನ ಸಭೆಗಳಲ್ಲಿ ಮೀಸಲಾತಿ
334. ಸ್ಥಾನ ಮೀಸಲಾತಿ ಮತ್ತು ವಿಶೇಷ ಪ್ರಾತಿನಿಧ್ಯತೆಯನ್ನು ಸಂವಿಧಾನ ಜಾರಿಗೆ ಬಂದ 60 ವರ್ಷಗಳಲ್ಲಿ ನಿಲ್ಲಿಸುವುದು
335. ಸೇವೆಗಳು ಮತ್ತು ಹುದ್ದೆಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕ್ಲೇಮು
336. ಕೆಲವು ಸೇವೆಗಳಲ್ಲಿ ಆಂಗ್ಲೊ - ಇಂಡಿಯನ್ ಸಮುದಾಯಕ್ಕೆ ವಿಶೇಷ ಉಪಬಂಧಗಳು
337. ಆಂಗ್ಲೊ - ಇಂಡಿಯನ್ ಸಮುದಾಯದ ಇಳಿತಿಗಾಗಿ ಶೈಕ್ಷಣಿಕ ಅನುದಾನಕ್ಕೆ ಸಂಬಂಧಿಸಿದಂತೆ ವಿಶೇಷ ಉಪಯಬಂಧಗಳು
338. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ
338 A . ಪರಿಶಿಷ್ಟರ ಪಂಗಡಗಳ ರಾಷ್ಟ್ರೀಯ ಆಯೋಗ
339. ಪರಿಶಿಷ್ಟ ಪ್ರದೇಶಗಳ ಆಡಳಿತ ಮತ್ತು ಬುಡಕಟ್ಟು ಜನರ ಅಲಯಾನದ ಮೇಲೆ ಕೇಂದ್ರದ ನಿಯಂತ್ರಣ
340. ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ವಿಚಾರಣೆಗಾಗಿ ಆಯೋಗದ ನೇಮಕ
341. ಪರಿಶಿಷ್ಟ ಜಾತಿ
342. ಪರಿಶಿಷ್ಟ ವರ್ಗ
ಭಾಗ - 17
ಅಧ್ಯಾಯ - 1 - ಒಕ್ಕೂಟದ ಭಾಷೆ
343. ಕೇಂದ್ರದ ಆಡಳಿತ ಭಾಷೆ
344. ಆಡಳಿತ ಭಾಷೆಗೆ ಸಂಬಂಧಿಸಿದ ಸಂಸದೀಯ ಆಯೋಗಗಳು ಮತ್ತು ಸಮಿತಿಗಳು
ಅಧ್ಯಾಯ - 2 - ಪ್ರಾದೇಶಿಕ ಭಾಷೆಗಳು
345. ರಾಜ್ಯದ ಆಡಳಿತ ಭಾಷೆ ಅಥವಾ ಭಾಷೆಗಳು
346. ಒಂದು ರಾಜ್ಯ ಮತ್ತು ಇನ್ನೊಂದು ರಾಜ್ಯದ ನಡುವೆ ಅಥವಾ ಒಂದು ರಾಜ್ಯ ಮತ್ತು ಕೇಂದ್ರದ ನಡುವಣ ಸಂಪರ್ಕಕ್ಕೆ ಆಡಳಿತ ಭಾಷೆ
347. ಒಂದು ರಾಜ್ಯದ ಒಂದು ವರ್ಗದ ಜನರು ಆಡುವ ಭಾಷೆಗೆ ಸಂಬಂಧಿಸಿದಂತೆ ವಿಶೇಷ ಉಪಬಂಧ
348. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳಲ್ಲಿ ಹಾಗೂ ಕಾಯ್ದೆ, ಮಸೂದೆ ಇತರೆಯಲ್ಲಿ ಬಳಸಬೇಕಾದ ಭಾಷೆ
349. ಭಾಷೆಗೆ ಸಂಬಂಧಿಸಿದ ಕೆಲವು ಕಾನೂನುಗಳನ್ನು ರೂಪಿಸಲು ಇರುವ ವಿಶೇಷ ನಿಯಮಗಳು
ಅಧ್ಯಾಯ - 3 - ವಿಶೇಷ ನಿರ್ದೇಶನಗಳು
350. ಕುಂದು ಕೊರತೆಗಳ ನಿವಾರಣೆಗಾಗಿ ಸಲ್ಲಿಸಲಾಗುವ ಮನವಿ ಪತ್ರಗಳಲ್ಲಿ ಉಪಯೋಗಿಸಬೇಕಾದ ಭಾಷೆಗಳು
350 A. ಪ್ರಾಥಮಿಕ ಶಾಲೆಗಳಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು
350 B. ಭಾಷಾ ಅಲ್ಫಸಂಖ್ಯಾತರ ವಿಶೇಷ ಅಧಿಕಾರಿ
351. ಹಿಂದಿ ಭಾಷೆಯ ಅಭಿವೃದ್ದಿಗಾಗಿ ನಿರ್ದೇಶನಗಳು
ಭಾಗ - 18
ತುರ್ತು ಪರಿಸ್ಥಿತಿ ಉಪಬಂಧಗಳು
352. ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ
353. ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯ ಪರಿಣಾಮ
354. ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ಆದಾಯ ಹಂಚಿಕೆಗೆ ಸಂಬಂಧಿಸಿದ ಉಪಬಂಧಗಳು
355. ವಿದೇಶಿ ಆಕ್ರಮಣ ಮತ್ತು ಆಂತರಿಕ ಗಲಭೆಗಳಿಂದ ರಾಜ್ಯಗಳನ್ನು ರಕ್ಷಿಸುವ ಕೇಂದ್ರದ ಅಧಿಕಾರ
356. ರಾಜ್ಯದಲ್ಲಿ ಸಂವಿಧಾನಾತ್ಮಕ ಯಂತ್ರ ಕುಸಿದು ಬಿದ್ದಾಗ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸುವುದಕ್ಕೆ ಸಂಬಂಧಿಸಿದಕ್ಕೆ ಸಂಬಂಧಿಸಿದ ಉಪಬಂಧ ಗಳು
357. 356 ನೇ ವಿಧಿಯಡಿಯಲ್ಲಿ ರಾಷ್ಟ್ರಾಧ್ಯಕ್ಷರ ಆಡಳಿತ ಘೋಷಿಸಲ್ಪಟ್ಟಾಗ ಶಾಸನಿಯ ಕಾರ್ಯಗಳನ್ನು ಚಾಲಾಯಿಸುವುದು
358. ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ 19 ನೇ ವಿಧಿಯ ಉಪಬಂಧಗಳನ್ನು ಅಮಾನತುಗೊಳಿಸುವುದು
359. ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಮೂರನೆಯ ಭಾಗದಲ್ಲಿ ಖಾತ್ರಿಗೋಳಿಸಲಾಗಿರುವ ಮೂಲಭೂತ ಹಕ್ಕುಗಳ ಅನುಷ್ಟಾನವನ್ನು ಅಮಾನತುಗೊಳಿಸುವುದು
359 A. ರದ್ದುಪಡಿಸಲಾಗಿದೆ
360. ಹಣಕಾಸು ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಉಪಬಂಧಗಳು
ಭಾಗ - 19
ಇತರೆ
361 . ರಾಷ್ಟ್ರಾಧ್ಯಕ್ಷರು, ರಾಜ್ಯಪಾಲರುಗಳು ಮತ್ತು ಪ್ರಮುಖರ ರಕ್ಷಣೆ
361 A. ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಕಾರ್ಯ ಕಲಾಪಗಳ ಪ್ರಕಟಣೆಯ ರಕ್ಷಣೆ
362. ರದ್ದು ಪಡಿಸಲಾಗಿದೆ
363. ಕೆಲವು ಒಪ್ಪಂದಗಳಿಂದ ಉಂಟಾಗಬಹುದಾದ ವಿವಾದಗಳಲ್ಲಿ ನ್ಯಾಯಲಾಯಗಳು ಹಸ್ತಕ್ಷೇಪ ಮಾಡದಂತೆ ನಿಷೇಧ
363 A. ದೇಶೀಯ ರಾಜ್ಯಗಳ ರಾಜರುಗಳಿಗೆ ಕೊಟ್ಟಿರುವ ಮನ್ನಣೆ ನಿಂತುಹೋಗುವುದು ಮತ್ತು ರಾಜಧನಗಳನ್ನು ರದ್ದುಪಡಿಸುವುದು
364. ಪ್ರಮುಖ ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ವಿಶೇಷ ಉಪಬಂಧಗಳು
365. ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಜಾರಿಗೊಳಿಸದಿದ್ದರೆ ರಾಜ್ಯಗಳು ಎದುರಿಸಬೇಕಾದ ಪರಿಣಾಮ
366. ವ್ಯಾಖ್ಯೆಗಳು
367. ಅರ್ಥವಿವರಣೆ
ಭಾಗ - 20
ಸಂವಿಧಾನದ ತಿದ್ದುಪಡಿ
368. ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರ ಮತ್ತು ನಿಯಮಗಳು
ಭಾಗ - 21
ತಾತ್ಕಾಲಿಕ, ಸ್ಥಿತ್ಯಂತರ ಮತ್ತು ವಿಶೇಷ ಉಪಬಂಧಗಳು
369. ರಾಜ್ಯ ಪಟ್ಟಿಯಲ್ಲಿರುವ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನು ಮಾಡುವ ಸಂಸತ್ತಿನ ತಾತ್ಕಾಲಿಕ ಅಧಿಕಾರ
370. ರದ್ದು ಪಡಿಸಲಾಗುದೆ
371. ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಸಂಬಂಧಿಸಿದ ವಿಶೇಷ ಉಪಬಂಧಗಳು
371 A. ನಾಗಾಲ್ಯಾಂಡ್ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 B. ಅಸ್ಸಾಂ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371. C. ಮಣಿಪುರ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 D. ಆಂಧ್ರಪ್ರದೇಶ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 E. ಆಂಧ್ರಪ್ರದೇಶದಲ್ಲಿ ಕೇಂದ್ರ ವಿಶ್ವವಿದ್ಯಾಲಯ ಸ್ಥಾಪನೆ
371 F. ಸಿಕ್ಕಿಂ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 G. ಮಿಜೋರಾಂ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 H. ಅರುಣಾಚಲ ಪ್ರದೇಶ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 I. ಗೋವಾ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
371 J. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವಿಶೇಷ ಉಪಬಂಧ
372 . ಆಸ್ತಿತ್ವದಲ್ಲಿರುವ ಕಾನೂನುಗಳನ್ನು ಮುಂದುವರೆಸುವುದು ಮತ್ತು ಅಳವಡಿಸಿಕೊಳ್ಳುವುದು
372 A. ಕಾನೂನುಗಳನ್ನು ಅಳವಡಿಸಿಕೊಳ್ಳಲು ರಾಷ್ಟ್ರಾಧ್ಯಕ್ಷರಿಗೆ ಇರುವ ಅಧಿಕಾರ
373 . ಕೆಲವು ಪ್ರಕರಣಗಳಲ್ಲಿ ಮುನ್ನೆಚ್ಚರಿಕೆ ಬಂಧನದಲ್ಲಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಆದೇಶ ರೂಪಿಸುವ ರಾಷ್ಟ್ರಾಧ್ಯಕ್ಷರ ಅಧಿಕಾರ
374. ಪೆಡರಲ್ ನ್ಯಾಯಾಲಯದ ನ್ಯಾಯಾಧೀಶರ ಬಗ್ಗೆ ಮತ್ತು ಪೆಡರಲ್ ನ್ಯಾಯಾಲಯದ ಮುಂದೆ ಇತ್ಯಾರ್ಥದಲ್ಲಿರುವ ವ್ಯವಹರಣೆಯ ಬಗ್ಗೆ ಉಪಬಂಧ
375 . ಸಂವಿಧಾನದ ಉಪಬಂಧಗಳಿಗೆ ಅನುಗುಣವಾಗಿ ನ್ಯಾಯಲಾಯಗಳು, ಪ್ರಾಧಿಕಾರಗಳು ಮತ್ತು ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಮುಂದುವರೆಸುವುದು
376. ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಿಗೆ ಸಂಬಂಧಿಸಿದ ಉಪಬಂಧಗಳು
377. CAGಗೆ ಸಂಬಂಧಿಸಿದ ಉಪಬಂಧಗಳು
378. ಲೋಕ ಸೇವಾ ಆಯೋಗಗಳಿಗೆ ಸಂಬಂಧಿಸಿದ ಉಪಬಂಧಗಳು
378 A. ಆಂಧ್ರಪ್ರದೇಶ ವಿಧಾನಸಭೆಯ ಅವಧಿಗೆ ಸಂಬಂಧಿಸಿದ ವಿಶೇಷ ಉಪಬಂಧಗಳು
379 ರಿಂದ 391 ರವರೆಗೆ ರದ್ದು ಪಡಿಸಲಾಗಿದೆ
392 . ತೊಂದರೆಗಳನ್ನು ನಿವಾರಿಸುವ ರಾಷ್ಟ್ರಾಧ್ಯಕ್ಷರ ಅಧಿಕಾರ
ಭಾಗ - 22
ಲಘು ಶೀರ್ಷಿಕೆ, ಆರಂಭ
393. ಲಘು ಶೀರ್ಷಿಕೆ
394. ಆರಂಭ
394 A. ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ
395 . ರಾದ್ದತಿಗಳು
great work sir
ಪ್ರತ್ಯುತ್ತರಅಳಿಸಿಧನ್ಯವಾದಗಳು